ಬೆಂಗಳೂರು ನಗರ ಜಿಲ್ಲೆ-ಕಾಡುಗುಡಿ ಗ್ರಾಮದಲ್ಲಿರುವ, “ಚೋಳರ ಕಾಲದ ಕಾಶಿ ವಿಶ್ವನಾಥ ದೇವಾಲಯ”
ಇನ್ನು ಪ್ರಾಚ್ಯವಸ್ತು ಇಲಾಖೆಯ ಕಣ್ಣಿಗೆ ಬೀಳದ “ಚೋಳರ ಕಾಲದ ‘ಕಾಶಿ ವಿಶ್ವನಾಥ’ ದೇವಾಲಯ” ಇದು ವೈಟ್ ಫೀಲ್ಡ್ ಗೆ ಸಮೀಪವಿರುವ ‘ಕಾಡುಗುಡಿ’ ಗ್ರಾಮದಲ್ಲಿದೆ.
ಬೃಹತ್ ಬೆಂಗಳೂರು ಮಹಾಪಾಲಿಕೆಯ ಸರಹದ್ದಿಗೆ ಬರುವ ಮಹದೇವಪುರ ನಗರಸಬೆಯ ಕಾಡುಗುಡಿ ಗ್ರಾಮದಲ್ಲಿನ ಪುರಾತನ ದೇವಾಲಯ.
ದೇವಾಲಯದ ವರ್ಣನೆ:
ದೇವಾಲಯದ ಕಟ್ಟಡವು ೧೦೦%ರಷ್ಟು ಕಲ್ಲಿನಿಂದ ಕೂಡಿದ್ದು. ಹಾಗು ದೇವಾಲಯದ ಸುತ್ತಲು ಎತ್ತರವಾದ ಕಲ್ಲಿನ ತಡೆಗೋಡೆ ಇದೆ, ದೇವಾಲಯದ ಗೋಡೆಗಳಮೇಲೆ ಅಪರೂಪದ ಶಿಲ್ಪಕಲೆಗಳಿವೆ, ಇವು ಶಿಲ್ಪಿಯ ಕಲಾ ಕೌಶಲ್ಯಕ್ಕೆ ಕಳಶವಿಟ್ಟಂತೆ ಇದೆ. ದೇವಾಲಯದ ಆವರಣದಲ್ಲಿ ೫ ಸಣ್ಣ ಗುಡಿಗಳು ಮತ್ತು ಒಂದು ಹೋಮ ಕುಂಡವಿದೆ. ದೇವಾಲಯದ ಐತಿಹಾಸಿಕ ಹಿರಿಮೆಯನ್ನು ತಿಳಿಸಲು ಒಂದು ಕಲ್ಲಿನ ಶಾಸನವಿದೆ. ಈ ಶಾಸನವು ತಮಿಳು ಶಾಸನವಾಗಿದೆ.
ಇಲ್ಲಿನ ಜನರ ನಂಬಿಕೆ:
ಕೆಲವರು ಹೇಳುತಾರೆ ಇದು ತ್ರೇತಾಯುಗದಲ್ಲಿ ರಾಮನು ವನವಾಸದಲ್ಲಿದ್ದಾಗ ಇಲ್ಲಿಗೆ ಬೇಟಿನೀಡಿ ಈ ದೇವಾಲಯವನ್ನು ಸ್ಥಾಪಿಸಿದರೆಂದು ಮತ್ತು ಇನ್ನು ಕೆಲವರು ದ್ವಾಪರಯುಗದ ಪಾಂಡವರು ವನವಾಸದಲ್ಲಿದ್ದ ಈ ದೇವಾಲಯವನ್ನು ಒಂದು ರಾತ್ರಿಯಲ್ಲಿ ಕಟ್ಟಿದ್ದರೆಂದು, ದೇವಾಲಯದ ಸುತ್ತಲು ಇರುವ ೫ ಸಣ್ಣ ಗುಡಿಗಳು ಪಂಚ ಪಾಂಡವರ ಸಂಕೇತವಾಗಿದೆ ಎಂದು ನಂಬುತ್ತಾರೆ.
ಕಳೆದ ೬ ವರ್ಷಗಳವರೆಗೂ ಇಲ್ಲಿ ವರ್ಷಕ್ಕೆ ೩ ಜಾತ್ರೆಯಂತೆ ಊರ ಹಬ್ಬಗಳನ್ನು ಆಚರಿಸುತ್ತಿದ್ದರು.
೧) ಶ್ರೀ ರಾಮ ಬ್ರಹ್ಮ ರತೊಥ್ಸವ.
೨) ಶಿವನ ರಥೋತ್ಸವ ಮತ್ತು
೩) ಗ್ರಾಮದೇವತೆಗಳ ಹಬ್ಬ.
ಪ್ರತಿ ಕಾರ್ತಿಕ ಸೋಮವಾರದಂದು ದೇವಾಲಯಕ್ಕೆ ದೀಪದಲಾಂಕಾರ ಮಾಡಿ, ಲಕ್ಷ ದಿಪೋತ್ಸವದ ಮೂಲಕ ಬಹಳ ವಿಜ್ರುಂಬಣೆಯಿಂದ ಪೂಜೆ ಮಾಡಲಾಗುತ್ತದೆ,
ಈ ಯಾವುದೇ ಹಬ್ಬವಿರಲಿ ದೇವಾಲಯ ಮಾತ್ರ ಸುಂದರವಾಗಿ ಅಲಂಕಾರಗೊಳ್ಳುತಿತ್ತು, ಗ್ರಾಮಸ್ತರು ಕೂಡ ಸರ್ಕಾರದ ಸಹಾಯವಿಲ್ಲದೆ ದೇವಾಲಯವು ಹಾಳಾಗದಂತೆ ನೋಡಿಕೊಳ್ಳುತಿದ್ದರು.
ದೇವಾಲಯ ಈಗಿನ ಸ್ಥಿತಿ:
ಕೆಲವು ರಾಜಕೀಯದ ಕಾರಣಗಳಿಂದಾಗಿ ಊರಿನ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಂತು ಹೋಗಿದ್ದು, ದೇವಾಲಯವು ಅವನತಿಯ ಅಂಚಿಗೆ ತಲುಪುತ್ತಿದೆ. ದೇವಾಲಯದ ಗೋಡೆಗಳು ಕುಸಿಯಲು ಆರಂಬಿಸಿವೆ, ದೇವಾಲಯದ ತದೆಗೊದೆಯು ಕೆಲವೆಡೆ ನೆಲಸಮವಾಗಿವೆ, ಗೆಲವು ಪ್ರಾಚಿನ ಕಲಾಕೃತಿಗಳು ಮಾಯವಾಗಿದೆ ಇನ್ನುಕೆಲವು ಭಗ್ನಗೊಂಡಿದೆ. ದೇವಾಲಯದ ಸುತ್ತಲು ಇರುವ ೫ ಸಂನಗುದಿಗಳಲ್ಲಿ ೨ ಸಂಪೂರ್ಣ ಹಾಳಾಗಿದೆ. ವಿಷಾದಕರ ಸಂಗತಿ ಎಂದರೆ ದೇವಾಲಯದ ಪರಿಚಯ ಮಾಡಿಕೊಡುವ ಶಿಲಾಶಾಸನವನ್ನು ಜನರೇ ಮಣ್ಣಿನಲ್ಲಿ ಹೂತಿದ್ದರೆ. ಒಂದು ಕಾಲದಲ್ಲಿ ಪವಿತ್ರ ಸ್ತಳವಾಗಿದ್ದ ಈ ಸ್ಥಳವು ಈಗ ಕುಡುಕರಿಗೂ, ಜೂಜುಕೊರರಿಗೂ ಮತ್ತು ಪುಂಡ-ಪೋಕರಿಗಳಿಗೆ ಅಡ್ಡೆಯಾಗಿ ಮಾರ್ಪಡುತ್ತಿದೆ. ಈದೆವಾಲಯವು “ಮಾಜಿ ಮಹದೇವಪುರ ನಗರ ಸಭಾದ್ಯಕ್ಷರ” ನಿವಾಸದ ಹತ್ತಿರವಿರುವುದು ಈ ವಿಷಯ ಅವರಿಗೆ ಗೊತ್ತಿದ್ದೂ ಯಾವತರಹದ ಕ್ರಮವನ್ನು ಅವರು ಕೈಗೊಂಡಿಲ್ಲ. ಇದೆಲ್ಲ ಹೀಗೆ ಮುಂದುವರಿದರೆ ಒಂದು ಪುರಾತನ ಇತಿಹಾಸವೇ ಮುಗಿದ ಅದ್ಯಾಯವಾಗುತ್ತದೆ. ಇದೆವಾಲಯದ ಪುರಾತನದ ಪ್ರಕಾರ ಇದು ಪ್ರಾಚ್ಯವಸ್ತು ilakeya ಅಡಿನಕ್ಕೆ ಬರಬೇಕ್ಕಿತ್ತು ಆದರೆ ಇದು ಈತನಕ ಎಲೆಮರೆ ಕಾಯಿಯಂತೆ ಉಳಿದಿದೆ.
ಈ ದೇವಾಲಯದ ಛಾಯ ಚಿತ್ರಗಳಿಗಾಗಿ ಈ ಕೆಳಗಿನ ಅಂತರ್ಜಾಲಕ್ಕೆ ಬೇಟಿನೀಡಿ.
http://www.orkut.co.in/Main#Album.aspx?uid=6398769743411923966&aid=1223778792
ಧನ್ಯವಾದಗಳು
- ಮಂಜುನಾಥ.ಜಿ
